ARUN KUMAR K

Transfer Your Lifestyle
With Our Proven System
By Digitally
One Stop Solution For Your Whole Life
For Happy, Healthy, Wealthy and Sucessfull Life.
Our Focus

Financial Freedom / ಹಣಕಾಸಿನ ಸ್ವಾತಂತ್ರ್ಯ
ಪ್ರತಿ ತಿಂಗಳು ಲಕ್ಷಕ್ಕೂ ಮೀರಿ ಸಂಪಾದನೆ ತಲೆಮಾರುಗಳವರೆಗೆ

Ultimate Health / ಅತ್ಯುತ್ತಮ ಆರೋಗ್ಯ
ಆರೋಗ್ಯವಾಗಿ ನಡೆದಾಡಿಕೊಂಡು ಖುಷಿ ಖುಷಿಯಾಗಿ 100 ಕ್ಕೂ ಹೆಚ್ಚು ವರ್ಷ ಬದುಕುವುದು

Relationship / ಭಾಂಧವ್ಯ
ಎಲ್ಲರನ್ನು ಯಾವಾಗಲು ಮತ್ತು ವ್ಯಕ್ತಿಗಳು ಹೇಗೆ ಇದ್ದರು ಪ್ರೀತಿಸುವುದು ಮತ್ತು ಪ್ರೀತಿ ಸಂಪಾದನೆ ಮಾಡುವುದು

Life Education / ಜೀವನ ಶಿಕ್ಷಣ
ಎಂತಹ ಪರಿಸ್ಥಿತಿಯಲ್ಲೂ ಮತ್ತು ವ್ಯಕ್ತಿಗಳು ಹೇಗೆ ಇದ್ದರು ಪ್ರತೀಕ್ಷಣ ಸಂತೋಷವಾಗಿರುವುದು

Spirutual / ಆಧ್ಯಾತ್ಮ
ಅಂತರಂಗ ಪಯಣ ಚೈತನ್ಯದಲ್ಲಿ ವೃದ್ಧಿ ಮತ್ತು ಮುಕ್ತಿ ಪಡೆಯುವುದು

Contrubution / ಕೊಡುಗೆ
ಪ್ರತಿಯೊಬ್ಬರಿಗೂ ಈ 6 ವಿಷಯಗಳಲ್ಲೂ 100 % ಪಡೆಯಲು ಸಹಕರಿಸುವುದು

ಸತ್ಯ
ನಾವು ಯಾವಾಗಲೂ ಸತ್ಯ ಹೇಳುತ್ತೇವೆ ಯಾಕೆಂದರೆ ಈ ಸಿಸ್ಟಮ್ ನಲ್ಲಿ ಬರುವ ಯಾವುದೇ ಕೋರ್ಸ್ ಪ್ರಾಡಕ್ಟ್ ಅಥವಾ ವಿಚಾರ ಯಾವಾಗಲೂ ಸತ್ಯವಾಗಿ ಇರುತ್ತದೆ ಆದ್ದರಿಂದ ನಮಗೆ ಸುಳ್ಳು ಹೇಳುವ ಅವಶ್ಯಕತೆ ಇಲ್ಲ

ಪ್ರೇಮ್
ನಾವು ಯಾವಾಗಲೂ ಪ್ರೀತಿಯಿಂದ ಇರುತ್ತೇವೆ ಹಾಗೂ ಪ್ರೀತಿಯಿಂದ ಇರೋದನ್ನ ಹೇಳಿಕೊಡುತ್ತೇವೆ ನಮ್ಮ ಜೀವನದಲ್ಲಿ ಬರುವ ಯಾವುದೇ ಸವಾಲುಗಳನ್ನ ಪ್ರೀತಿಯಿಂದ ನಿಭಾಯಿಸುವುದನ್ನು ನಾವು ಈ ಸಿಸ್ಟಮ್ ಮುಖಾಂತರ ಹೇಳಿಕೊಡುತ್ತೇವೆ, ಈ ಸಿಸ್ಟಮ್ ಬಗ್ಗೆ ಯಾರಿಗೆ ಯಾವುದೇ ದ್ವೇಷ, ಕೋಪ, ಹಸುವೇ, ಏನೇ ಇದ್ದರೂ ನಾವು ಅವರನ್ನು ಕ್ಷಮಿಸಿ ಅವರಿಗೆ ಪ್ರೀತಿ ಕೊಡುತ್ತೇವೆ

ಸೇವ
ನಮ್ಮಲ್ಲಿ ಬರುವ ಯಾವುದೇ ಕೋರ್ಸ್ ಅಥವಾ ಪ್ರಾಡಕ್ಟ್ ಪ್ರತಿಯೊಬ್ಬರ ಸಮಸ್ಯೆ ಬಗೆಹರಿಸುವುದಕ್ಕಾಗಿಯೇ ಇರುತ್ತದೆ. ಎದುರುಗಡೆ ವ್ಯಕ್ತಿಯ ಸಮಸ್ಯೆ ತಿಳಿದು ಅವರಿಗೆ ಸೊಲ್ಯೂಷನ್ ಕೊಡುವ ಯಾವುದೇ ವಿಚಾರವನ್ನು ನಾವು ಸೇವೆ ಎನ್ನಬಹುದು, ಇನ್ನೊಬ್ಬರ ಖುಷಿ ಜೀವನಕ್ಕೆ ಸೇವೆ ಮಾಡುವುದಕ್ಕೆ ನಾವು ಯಾವಾಗಲೂ ಹೆದರುವುದಿಲ್ಲ ತಗ್ಗುವುದಿಲ್ಲ, ಯಾರಿಗೂ ಬಗ್ಗುವುದಿಲ್ಲ ಹಾಗೆ ನಾಚಿಕೆ ಕೂಡ ನಾವು ಪಡುವುದಿಲ್ಲ.

ಶಕ್ತಿ
ನಮ್ಮಲ್ಲಿ ಶಕ್ತಿ ಇರುವುದು ಯಾರೊಂದಿಗೂ ಜಗಳವಾಡುವುದಕ್ಕೆ ಅಥವಾ ಹೊಡೆದಾಡುವುದಕ್ಕೆ ಅಲ್ಲ, ನಿಜವಾದ ಶಕ್ತಿ ಇರಬೇಕಾಗಿರೋದು ನಮ್ಮ ಪೇಷನ್ಸ್ ನಲ್ಲಿ, ನಮ್ಮ ಪರ್ಸಿವೆರನ್ಸ್ ಹಾಗೂ ನಮ್ಮ ಅಬ್ಸರ್ವೇಶನಲ್ಲಿ, ನಿಜವಾದ ಶಕ್ತಿ ಇರಬೇಕಾಗಿರೋದು ನಮ್ಮ ವಿಷನ್ ನಲ್ಲಿ. ಈ ಎಲ್ಲಾ ವಿಷಯಗಳಲ್ಲಿ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ

ಭಕ್ತಿ
ಶಕ್ತಿಯ ಜೊತೆಗೆ ನಾವು ಭಕ್ತಿಯಿಂದ ಕೆಲಸ ಮಾಡುತ್ತೇವೆ ಇಲ್ಲಿ ಹೇಳಿಕೊಡುವ ಯಾವುದೇ ವಿಚಾರವನ್ನು ಭಕ್ತಿಯಿಂದ ಪಾಲನೆ ಮಾಡಿದ್ದೆ ಆದಲ್ಲಿ ನಿಮ್ಮ ಯಶಸ್ಸು ಖಂಡಿತ

ಯುಕ್ತಿ
ನಾವು ಯಾವಾಗಲೂ ಯುಕ್ತಿಯಿಂದ ಕೆಲಸ ಮಾಡಬೇಕು ಯಾಕೆಂದರೆ ನಾವು ಬುದ್ಧಿವಂತ ಮನುಷ್ಯರು ಕತ್ತೆಗಳಲ್ಲ ನಾವು ನಮ್ಮ ಯಶಸ್ಸನ್ನ ಮಲ್ಟಿ ಸೋರ್ಸ್ ಆಫ್ ಇನ್ಕಮ್ ನಿಂದ ಪಡೆಯಬೇಕು ಆ ರೀತಿಯ ಒಂದು ಸಿಸ್ಟಮ್ ಅನ್ನ ಕಂಡುಹಿಡಿದು ಅದರಲ್ಲಿ ಕೆಲಸ ಮಾಡಬೇಕು ಅದು ತಾನಾಗಿ ಆಟೋ ಪೈಲೆಟ್ ಆಗುವ ರೀತಿ ನಾವು ನೋಡಿಕೊಳ್ಳಬೇಕು

ತನ್
ನಾವು ನಮ್ಮ ದೇಹದ ಕಾಳಜಿ ವಹಿಸಬೇಕು ನಮ್ಮ ಶರೀರ ಸರಿಯಾಗಿ ಇಲ್ಲ ಎಂದರೆ ಅಲ್ಲಿ ಲಕ್ಷ್ಮಿ ದೇವಿ ಜೀವಿಸುವುದಕ್ಕೆ ಇಷ್ಟಪಡುವುದಿಲ್ಲ ನಾವು ಯಾವುದೇ ಹೊಸ ವಿಚಾರ ಕಲಿಯುವುದಕ್ಕೆ ನಮ್ಮ ಬಿಜಿನೆಸ್ ಅನ್ನ ದೊಡ್ಡದು ಮಾಡುವುದಕ್ಕೆ ನಮ್ಮ ಶರೀರ ಹೊಂದಾಣಿಕೆ ಅತಿ ಅವಶ್ಯಕ ಸ್ವಚ್ಛ ಮತ್ತು ಆರೋಗ್ಯವಂತ ಶರೀರ ಇದ್ದರೆ ಯಾವುದೇ ಹೊಸ ವಿಚಾರವನ್ನು ಅತಿ ಬೇಗ ತಿಳಿದುಕೊಳ್ಳಲು ಸಹಾಯವಾಗುತ್ತದೆ ಆರೋಗ್ಯವಾಗಿರಲು ಯಾವುದೋ ಪೌಡರ್ ಮಾತ್ರೆ ಡಯಟ್ ಮಾಡಿ ಎಂದು ಈ ಸಿಸ್ಟಮ್ ಹೇಳುತ್ತಿಲ್ಲ ಲಿಮಿಟ್ ಆಗಿ ಊಟ ಮಾಡಿ ತಾಜಾ ಮನೆಯಲ್ಲಿ ಮಾಡಿದ ಊಟವನ್ನು ಮಾಡಿ ಸಾಧ್ಯವಾದರೆ ರಾತ್ರೆ 7:00 ಒಳಗಡೆ ಊಟ ಮಾಡಿ ಸಿಂಪಲ್ ಆಗಿರಿ ಸ್ವಲ್ಪ ಊಟ ಮಾಡಿ ಸಾಕಷ್ಟು ನೀರು ಕುಡಿಯಿರಿ ಸಾಕಷ್ಟು ನಿದ್ದೆ ಮಾಡಿ ಸಾಧ್ಯವಾದರೆ ಪ್ರತಿದಿನ ನಿಮಗೆ ಇಷ್ಟವಾಗುವ ಆಟ ಯೋಗ ಧ್ಯಾನ ಎಕ್ಸರ್ಸೈಜ್ ಬೆಲ್ಲಿ ಡ್ಯಾನ್ಸ್ ಜುಂಬ ಯಾವುದಾದರೂ ಒಂದು ಮಾಡಿ ಶರೀರ ಆರೋಗ್ಯವಾಗಿರುವುದು ತುಂಬಾ ಅವಶ್ಯಕ ಯಾಕೆಂದರೆ ಒಂದು ಸಲ ಆರೋಗ್ಯ ಕಟ್ಟರೆ ಮತ್ತೆ ಮೊದಲನೇ ಸ್ಥಿತಿಗೆ ತರುವುದು ತುಂಬಾ ಕಷ್ಟ ಆಗುತ್ತದೆ

ಮನ
ಯಾವಾಗ ದೇಹ ಆರೋಗ್ಯವಾಗಿರುತ್ತದೆ ಆಗ ಮನಸ್ಸು ಕೂಡ ಸ್ವಚ್ಛವಾಗಿರುತ್ತದೆ ನಮ್ಮ ಜೀವನದಲ್ಲಿ ಆಗುವ ಎಲ್ಲಾ ಆಟಗಳಿಗೆ ನಮ್ಮ ಮನಸ್ಸೆ ಕಾರಣ ನಾವು ಯಾವುದೇ ಕೆಲವು ವಿಚಾರಗಳ ಬಗ್ಗೆ ತಿಳಿದುಕೊಂಡಾಗ ಅದನ್ನು ಅಳವಡಿಸಿಕೊಂಡು ಪರಿವರ್ತನೆ ಆಗುತ್ತೇವೆ ಅಲ್ಲವೇ ಪರಿವರ್ತನೆ ಆಗುವುದು ನಮ್ಮ ಮನಸ್ಸು ಶುದ್ದವಾಗಿದ್ದಾಗ ಮಾತ್ರ ಒಂದು ವೇಳೆ ನಿಮಗೆ ನಿಮ್ಮ ಮನಸ್ಸನ್ನು ಕಂಟ್ರೋಲ್ ಮಾಡುವುದಕ್ಕೆ ಬಂದರೆ ನಿಮ್ಮನ್ನು ಯಾರು ಯಾವುದೇ ಸಮಸ್ಯೆಯಿಂದ ಎದುರಿಸಲು ಸಾಧ್ಯವಿಲ್ಲ ಮನಸ್ಸನ್ನು ಕಂಟ್ರೋಲ್ ಮಾಡುವುದು ಯಾವುದೋ ದೊಡ್ಡ ಆಟ ಅಲ್ಲ ಇದು ಒಂದು ವಿಜ್ಞಾನ, ನಾವು ಮನಸ್ಸಿನ ಎಲ್ಲಾ ವಿಷಯಗಳನ್ನು ಕೇಳಲೇ ಬೇಕೆಂಬ ಅವಶ್ಯಕತೆ ಇಲ್ಲ ನಾವು ಏನು ಮಾಡುತ್ತಿದ್ದೇವೆ ಯಾತಕ್ಕಾಗಿ ಮಾಡುತ್ತಿದ್ದೇವೆ ಎಂಬುದು ತಿಳಿದಿದ್ದರೆ ಸಾಕು

ಧನ
ಈ ಎಲ್ಲಾ ಅಂಶಗಳ ಜೊತೆಗೆ ನಮ್ಮ ಗ್ಯಾನ ಧನ ಸಂಪಾದನೆಯಲ್ಲಿ ಕೂಡ ಇರಬೇಕು ಈ AK DIGITAL CARE ಸಿಸ್ಟಮ್ ನಮ್ಮ ಮುಖಾಂತರ ಹೊಸ ವಿಚಾರಗಳನ್ನು ಕಲಿಯುವುದು ಕಲಿಸುತ್ತಿರುವುದು ಧನ ಸಂಪಾದನೆಗೋಸ್ಕರ ಅದರಲ್ಲಿ ಯಾವುದೇ ಸಂದೇಹ ಬೇಡ, ಸೇವೆ ಮಾಡುವುದರ ಮೂಲಕ ಹಣ ಸಂಪಾದನೆ ಮಾಡುವುದು ಒಂದು ಒಳ್ಳೆಯ ಕೆಲಸ, ಹಣ ಸಂಪಾದನೆ ಇಲ್ಲ ಅಂದ್ರೆ ಮನೆ ನಡೆಸುವುದು ಜೀವ ನಡೆಸುವುದು ತುಂಬಾ ಕಷ್ಟ ಆಗುತ್ತದೆ, ಹೌದು ಜನಗಳಿಗೆ ಸೇವೆ ಮಾಡುತ್ತಿದ್ದೇವೆ ಅಂದರೆ ಹಣ ಸಂಪಾದನೆ ಕೂಡ ಮುಖ್ಯ, ಹಣ ಸಂಪಾದನೆ ಮಾಡುವುದು ಯಾವುದೇ ತಪ್ಪು ಕೆಲಸವಲ್ಲ, ನಮ್ಮ ಗ್ಯಾನ ಹಣ ಸಂಪಾದನೆಯಲ್ಲೂ ಕೂಡ ಇರುತ್ತದೆ, ಯಾಕೆಂದರೆ ಯಾವುದೇ ಒಬ್ಬ ಒಳ್ಳೆಯ ವ್ಯಕ್ತಿ ಹಣ ಸಂಪಾದನೆ ಮಾಡಿದರೆ ಅದು ಅವನಿಗೆ ಮಾತ್ರ ಉಪಯೋಗ ಆಗುವುದಿಲ್ಲ ಜೊತೆಗೆ ಅವನ ಕುಟುಂಬ, ನೆರವರೆಯವರು, ಅವನ ಊರು ಹೀಗೆ ಅನೇಕ ಒಳ್ಳೆ ಕೆಲಸಕ್ಕೆ ಉಪಯೋಗವಾಗುತ್ತದೆ ಆದ್ದರಿಂದ ಹಣ ಸಂಪಾದನೆ ತುಂಬಾ ಮುಖ್ಯ.